ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ ಶ್ರೇಯ ಕುಮಾರಸ್ವಾಮಿಗೆ ಸಲ್ಲಬೇಕು, ಯಡಿಯೂರಪ್ಪ ಸಾರಾಯಿ ನಿಷೇಧವನ್ನು ವಿರೋಧಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಆರ್.ಬಿ.ತಿಮ್ಮಾಪುರ ಮಾತನಾಡಿ "ಮದ್ಯ ನಿಷೇಧ ಮಾಡುವ ಯೋಚನೆ ಸರ್ಕಾರಕ್ಕಿಲ್ಲ, ನಿಷೇಧದ ಊಹಾಪೋಹ ಹರಿದಾಡಿತ್ತಷ್ಟೆ ಎಂದರು. ಈ ಬಗ್ಗೆ ಸಿದ್ದರಾಮಯ್ಯ ಅವರು ಮದ್ಯ ನಿಷೇಧದ ಬಗ್ಗೆ 'ನ್ಯಾಷನಲ್ ಪಾಲಿಸಿ' ಮಾಡಲು ಹೇಳಿ ಆಗ ನಿಷೇಧ ಮಾಡುತ್ತೇವೆ, ಗಾಂಧಿ ಹುಟ್ಟಿದ ಗುಜರಾತ್ ನಲ್ಲಿಯೇ ಸಂಪೂರ್ಣ ಮದ್ಯ ನಿಷೇಧ ಮಾಡಿಲ್ಲ ಎಂದು ಬಿಜೆಪಿ ಅವರಿಗೆ ಟಾಂಗ್ ನೀಡಿದರು. ಇದಕ್ಕೆ ಬಿಜೆಪಿಯ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಅವರುಗಳು ಮದ್ಯ ನಿಷೇಧ ಮಾಡಿ, ಬಿಹಾರದ ನಿತೀಶ್ ಕುಮಾರ್ ಗೆ ಸಾಧ್ಯವಾಗದ್ದು ನಿಮಗೇಕೆ ಸಾಧ್ಯವಾಗುವುದಿಲ್ಲ ಎಂದ ಒತ್ತಾಯಿಸಿದರು
The arrack ban is one of the two ambitious programmes of the JD (Secular) and BJP government intended to rescue poor people from addiction and debt. but C.M says Kumarswamy was the one to ban arrack in karnataka.